Banner IT Hub.tv
Advertise Here
Your Ad Here

News

ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಬರಲು ಉಚಿತ ವಾಹನ ಸೇವೆಗೆ ಚಾಲನೆ

ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಬರಲು ಉಚಿತ ವಾಹನ ಸೇವೆಗೆ ಚಾಲನೆ


 

ಸರ್ಕಾರಿ ಶಾಲೆಯ ಮಕ್ಕಳಿಗೆ ಮನೆಯಿಂದ ಶಾಲೆಗೆ-ಶಾಲೆಯಿಂದ ಮನೆಗೆ ಉಚಿತ ವಾಹನ ಸೇವೆಗೆ ಚಾಲನೆ - ಸಮಾಜ ಸೇವಕ  ಬಿನಿಸ್ ಥಾಮಸ್ ರವರ ಇಂದು ಶಾಲಾ ಮುಖ್ಯೋಪಾಧ್ಯಾಯರಿಗೆ ವಾಹನ ಹಸ್ತಾಂತರಿಸಿದರು.  

 

 ಬೆಂಗಳೂರು Aug 10:-  ಬೆಂಗಳೂರು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಇರುವ ತುಬರನಹಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಮನೆಯಿಂದ ಶಾಲೆಗೆ-ಶಾಲೆಯಿಂದ ಮನೆಗೆ ಉಚಿತ ವಾಹನ ಸೇವೆಗೆ ಇಂದು ಸಮಾಜ ಸೇವಕ  ಬಿನಿಸ್ ಥಾಮಸ್ ಚಾಲನೆ ನೀಡಿದರು. 
ವಾಹನವನ್ನು ಪ್ರಾಯೋಜಕತ್ವ ನೀಡಿದ ಬಿನಿಸ್ ಥಾಮಸ್ ಮಾತನಾಡಿ ಈಗಾಗಲೇ ಬಸ್ ಒಂದನ್ನು ಬುಕ್ ಮಾಡಿದ್ದು, ಶೀಘದಲ್ಲೇ ಶಾಲೆಯ ಎಲ್ಲಾ ಮಕ್ಕಳು ಬಸ್‍ನಲ್ಲೇ ಶಾಲೆಗೆ  ಬರುವ ವ್ಯವಸ್ಥೆಯಾಗಲಿದೆ ಎಂದು ವಿವರಿಸಿದರು. 
ಅತ್ಯಂತ ವಾಹನ ಸಂಚಾರದ ದಟ್ಟಣೆಯುಳ್ಳ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ವಯಸ್ಕರಿಗೆ ಓಡಾಡುವುದು ಕಷ್ಟವಾಗುತ್ತದೆ.  ಹೀಗಿರುವಾಗ ಪುಟ್ಟ ಶಾಲಾ ಮಕ್ಕಳು ಶಾಲೆಗೆ ನಡೆದುಕೊಂಡು ಹೋಗುವಾಗ ಜೀವ ಹಿಡಿದುಕೊಂಡೇ ಭಯದಿಂದ ಓಡಾಡಬೇಕಾಗಿದೆ.  ಶಾಲೆಗೆ ಕಳುಹಿಸಿದ ಮಕ್ಕಳ ತಂದೆ ತಾಯಿಗಳು ಮಕ್ಕಳು ವಾಪಸ್ಸು ಬರುವವರೆಗೆ ಭಯದಿಂದಲೇ ಇರಬೇಕಾದ ಪರಿಸ್ಥಿತಿ.  ಇಂತಹ ಪರಿಸ್ಥಿತಿಗೆ ಬೆಚ್ಚಿಬಿದ್ದ ಅನೇಕ ಮಕ್ಕಳು ಶಾಲೆಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟರು. ಶಾಲೆಯಿಂದ ಹೊರಬೀಳುತ್ತಿದ್ದ ಮಕ್ಕಳ ಸಂಖ್ಯೆ ಸಾಕಷ್ಟು ಬೆಳೆಯಿತು.    
ತುಬರನಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಈ ವಿಚಿತ್ರ ಸಮಸ್ಯೆ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾದಾಗ ಸದ್ದು ಗದ್ದಲವಿಲ್ಲದೆ ಎಲೆಮರೆಯ ಕಾಯಂತೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಸಮಾಜ ಸೇವಕ  ಬಿನಿಸ್ ಥಾಮಸ್ ತಕ್ಷಣ ಕಾರ್ಯ ಪ್ರವೃತ್ತರಾದರು.  
ಶಾಲೆಯ ಮುಖ್ಯೋಪಾಧ್ಯಾಯರನ್ನು ಭೇಟಿ ಮಾಡಿ ಚರ್ಚಿಸಿ ಸಮಸ್ಯೆಯನ್ನು ಅರಿತುಕೊಂಡು ಪರಿಹಾರ ಕಲ್ಪಿಸಿಯೇಬಿಟ್ಟರು. ಅದುವೇ ಮನೆಯಿಂದ ಶಾಲೆಗೆ- ಶಾಲೆಯಿಂದ ಮನೆಗೆ ಕರೆದೊಯ್ಯುವ ಉಚಿತ ವಾಹನ ಸೇವೆಗೆ ಚಾಲನೆ ನೀಡಲಾಯಿತು.  

 





Inner Btm brdr
Advertising Here
Advertise Here Free counters!